Surprise Me!

6 ತಿಂಗಳಿಂದ ನಿಂತ ಸ್ಥಳದಲ್ಲೇ ನಿಂತಿದೆ ಆಂಬ್ಯುಲೆನ್ಸ್..! | Chikkaballapura | Public TV

2022-09-26 10 Dailymotion

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ವಾರ್ಡ್‍ನ ಶೌಚಾಲಯ ಬ್ಲಾಕ್ ಆಗಿ ನೀರು ಹೊರಬಂದು ರೋಗಿಯೊಬ್ಬರು ಕುಸಿದು ಬಿದ್ದಿದ್ದಾರೆ. ಶೌಚಾಲಯದಿಂದ ಒಂದೇ ಸಮನೆ ನೀರು ಹೊರಗೆ ಬಂದಿದೆ. ಈ ವೇಳೆ ಶೌಚಕ್ಕೆ ಹೋಗಿದ್ದ ರಂಗಮ್ಮ ಎಂಬ ರೋಗಿ ಜಾರಿ ಬಿದ್ದಿದ್ದಾರೆ. ಜಾರಿ ಬಿದ್ದ ರಂಗಮ್ಮರನ್ನು ಎತ್ತಲು ನರ್ಸ ಆಗಲಿ, ಆಸ್ಪತ್ರೆ ಸಿಬ್ಬಂದಿಯಾಗಲಿ ಯಾರೂ ಬಂದಿಲ್ಲ. ಸುಮಾರು 1 ಗಂಟೆ ನಂತರ ರಂಗಮ್ಮಳ ಸಂಬಂಧಿಗಳು ಬಂದು ವೀಲ್ ಚೇರ್ ಮೂಲಕ ವಾರ್ಡ್‍ಗೆ ಕರೆದೊಯ್ದಿದ್ದಾರೆ.<br /><br />ರಾಜ್ಯದಲ್ಲಿ 108 ಅಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಆಗಿ ಜನಸಾಮಾನ್ಯರು ಪರದಾಡುವಂತಾಗಿದ್ರೆ ಇತ್ತ ಆರೋಗ್ಯ ಸಚಿವರ ತವರು ಚಿಕ್ಕಬಳ್ಳಾಪುರದಲ್ಲಿ ಕಳೆದ 6 ತಿಂಗಳಿಂದ ಸುಮಾರು 20 ಲಕ್ಷ ಬೆಲೆಬಾಳುವ ಆಂಬ್ಯುಲೆನ್ಸ್‍ಗಳು ನಿಂತಲ್ಲೇ ನಿಂತಿವೆ. ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿರುವ ಬಿಜೆಪಿ ಎಂಎಲ್‍ಸಿ ಚಿದಾನಂದ ಗೌಡ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್‍ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ, ಆಂಬ್ಯುಲೆನ್ಸ್ ಉದ್ಘಾಟನೆಗೆ ಬಾರದ ಚಿದಾನಂದಗೌಡರಿಂದ ಆಂಬ್ಯುಲೆನ್ಸ್‍ಗಳು ನಿಂತಲ್ಲೇ ನಿಂತಿದ್ದು ರೋಗಿಗಳ ಪಾಲಿಗೆ ಇದ್ದರೂ ಇಲ್ಲದಂತಾಗಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.<br /><br />#publictv #tumkur #chikkaballapura

Buy Now on CodeCanyon